ಇದು ಮನೆಯಲ್ಲಿ ಗುಂಡಿಯೊತ್ತಿ ಲೈಟ್ ಹಾಕಿದಂತಲ್ಲ, ನೊಣ ಅಡ್ಡಬಂದರೂ ಹಾರನ್ ಮಾಡಿ ಲೈಟ್ ಹಾಕುವ ದ್ವಿಚಕ್ರ ವಾಹನಗಳಂತಲ್ಲ, ದಿನವಿಡೀ ಉರಿವ ಸ್ಟ್ರೀಟ್ ಲೈಟ್ ಅಲ್ಲ.
ನಮ್ಮ ಊರಕಡೆ ಹಬ್ಬ, ಮದುವೆ ಮುಂತಾದ ಕಾರ್ಯಗಳಲ್ಲಿ ಮಾವಿನ ತೋರಣ ಕಟ್ಟುತ್ತಾರೆ. ಈಗೀಗ ಬಣ್ಣ ಬಣ್ಣದ ಲೈಟ್ಗಳು ಜಾಸ್ತಿಯಾಗಿ ಮಾವಿನೆಲೆಯ ತೋರಣ ಕಡಿಮೆಯಾದರೂ ಶುಭಕಾರ್ಯಗಳಿಗೆ ಮಾವಿನ ತೋರಣದ ಪದ್ದತಿ ಇನ್ನೂ ಜೀವಂತವಾಗಿದೆ. ಬೆಂಗಳೂರಲ್ಲೂ ಇದು ನಡೆದುಬಂದ ಪದ್ದತಿ.
ಹೊಸಪದ್ದತಿಯೊಂದನ್ನು ಎಲ್ಲರೂ ಗಮನಿಸಿರಬಹುದು [ತೀರಾ ಹೊಸದೇನಲ್ಲ ಬಿಡಿ..]. ಚೌತಿ, ದೀಪಾವಳಿ ಬಂತೆಂದರೆ ಸೀರೆ ಬಟ್ಟೆ ಅಂಗಡಿಗಳು ಬಣ್ಣ ಬಣ್ಣದ ದೀಪಗಳ ಸರಮಾಲೆಗಳಿಂದ ಝಗಮಗಿಸುತ್ತಿರುತ್ತವೆ, ಅಕ್ಷಯ ತೃತೀಯದಂದು ಬಂಗಾರದ ಅಂಗಡಿಗಳು ಕಂಗೊಳಿಸುತ್ತಿರುತ್ತವೆ. ಕತ್ತಿಮಸೆದು ಕೂತ ಶಾಪಿಂಗ್ ಮಾಲ್ ಗಳಂತೂ ವರ್ಷವಿಡೀ ಹೊಳೆಯುತ್ತಿರುತ್ತವೆ. ಇರಲಿ.. ಬಟ್ಟೆ, ಬಂಗಾರ ಖರೀದಿಸುವುದೂ ಒಂದು ಶುಭಕಾರ್ಯವೇ.
ಆದರೆ.. ಹೊಸವರ್ಷ ಬಂತೆಂದರೆ ಸಾಕು... ತಗಳಪ್ಪಾ... ಊರಲ್ಲಿರುವ ಬಾರುಗಳಿಗೆಲ್ಲಾ ವೈನ್ ಶಾಪ್ ಗಳಿಗೆಲ್ಲಾ ಕಣ್ಣುಕೋರೈಸುವ ಬಣ್ಣಬಣ್ಣದ ದೀಪಗಳ ಸರಮಾಲೆ. ಹಾದಿಬೀದಿಗಳಲ್ಲಿರುವ ಸಣ್ಣಪುಟ್ಟ ಬಾರುಗಳಲ್ಲೆಲ್ಲಾ ಹಬ್ಬದ ಸಂಭ್ರಮ.. ಅದೇನು ಹಬ್ಬವೋ.. ಸಂಭ್ರಮವೋ ನಾಕಾಣೆ....
Friday, December 31, 2010
Thursday, December 9, 2010
Monday, November 22, 2010
Monday, October 11, 2010
Sunday, October 3, 2010
OVER weight?
My doctor said: “According to Height to weight ratio chart, you are OVER weight. You are X kg more for your height”
Shocked! Explained him few Lateral thinking and Problem analysis techniques [Thanks to LnD (Learning and Development) program in my previous company] and said: “Always there will be multiple approaches to a problem. According to these techniques, my height is less for the weight".
I am no more an ‘OVER weight’ person. I am just ‘UNDER height’
Shocked! Explained him few Lateral thinking and Problem analysis techniques [Thanks to LnD (Learning and Development) program in my previous company] and said: “Always there will be multiple approaches to a problem. According to these techniques, my height is less for the weight".
I am no more an ‘OVER weight’ person. I am just ‘UNDER height’
Wednesday, September 29, 2010
ಗುಂಡಾಲಿ ಪಟ
ಸೂರ್ಯ ಚಂದ್ರ ಆಟೀನ್ ನನ್ನ ಕೈಯೊಳಗೆ
ಖಾಲೀ ಪರ್ಸು.. ನಿನ್ನ ಜೇಬೊಳಗೆ
ಪಟ ಮುಟ್ಟಿ ಮನೆ ದೇವ್ರ ನೆನೆದು ಬಿಡಿ
ಸಾಲ ಮಾಡಕ್ಕೆ ರೆಡಿಯಾಗಿಬಿಡಿ..
ಒಳ್ಳೆ ಲಕ್ಕು ಇತ್ತು ಅಂದ್ರೆ ನೀವು ಕೂಡಾ ಗೆಲ್ಲಬಹುದು
ಬೀಳೋದಿಲ್ಲ ಹಾಗೆ ಗುಂಡು ಪಟ ನಂದು
ನೀವು ಆಡಬೇಕು ಮೂರು ಗುಂಡು ನೆಚ್ಚಿಕೊಂಡು
ಗುಡು ಗುಡು ಸದ್ದು ಕೇಳಿಕೊಂಡು ಗ್ಯಾಸ್ ಲೈಟು ಹುಡುಕಿಕೊಂಡು
ಬಂದು ಗುಂಪು ಸೇರಿರಿ ಅಡಗಿಕೊಂಡು
ನಿಮ್ಮ ಅಕ್ಕ ಪಕ್ಕ ಇದ್ದವ್ರನ್ನ ನೋಡಿಕೊಂಡು
ಆಟ ಶುರು ಹಚ್ಚ ಬೇಡ ಸ್ವಲ್ಪ ತಡಿ
ಪಟ ಹೆಂಗೇ ಅಂತ ನೋಡಿ ಹೊಡಿ.
ಯಾವ್ದು ಇಲ್ಲಿ ಸಿಂಗಲ್ ಬಿತ್ತು ಯಾವ್ದು ಇಲ್ಲಿ ಡಬ್ಬಲ್ ಬಿತ್ತು
ಹೇಳುವುದು ಕಷ್ಟ ನೆನಪಿಟ್ಟುಕೊಂಡು
ನಾವ್ ಆಡಬೇಕು ಕುಕ್ಕರಗಾಲಲ್ ಕೂತುಕೊಂಡು
ಹೆಗ್ಡೇರ ಪೈಕಿ ನಾವು ಆಟ ನೋಡಕ್ ಬರುತ್ತೀವಿ
ಹಳೇ ನೋಟು ಅಷ್ಟು ಇಷ್ಟು ಇಟ್ಟುಕೊಂಡು
ನಾವು ಪಟ ಇದ್ರೆ ಆಡಬಹುದು ಅಂದುಕೊಂಡು
ದುಡ್ಡು ಖಾಲಿ ಆದರೆ ಆಗ್ಲಿ ಬಿಡಿ
ಬೆಳಗಿನ್ ಜಾವದ ಆಟ ನೋಡಿ ಹೋಗಿ ಬಿಡಿ..
[ಜಾಕಿ 'ಎಕ್ಕ ರಾಜ ರಾಣಿ' ಕದ್ದಿದ್ದು....]
ಖಾಲೀ ಪರ್ಸು.. ನಿನ್ನ ಜೇಬೊಳಗೆ
ಪಟ ಮುಟ್ಟಿ ಮನೆ ದೇವ್ರ ನೆನೆದು ಬಿಡಿ
ಸಾಲ ಮಾಡಕ್ಕೆ ರೆಡಿಯಾಗಿಬಿಡಿ..
ಒಳ್ಳೆ ಲಕ್ಕು ಇತ್ತು ಅಂದ್ರೆ ನೀವು ಕೂಡಾ ಗೆಲ್ಲಬಹುದು
ಬೀಳೋದಿಲ್ಲ ಹಾಗೆ ಗುಂಡು ಪಟ ನಂದು
ನೀವು ಆಡಬೇಕು ಮೂರು ಗುಂಡು ನೆಚ್ಚಿಕೊಂಡು
ಗುಡು ಗುಡು ಸದ್ದು ಕೇಳಿಕೊಂಡು ಗ್ಯಾಸ್ ಲೈಟು ಹುಡುಕಿಕೊಂಡು
ಬಂದು ಗುಂಪು ಸೇರಿರಿ ಅಡಗಿಕೊಂಡು
ನಿಮ್ಮ ಅಕ್ಕ ಪಕ್ಕ ಇದ್ದವ್ರನ್ನ ನೋಡಿಕೊಂಡು
ಆಟ ಶುರು ಹಚ್ಚ ಬೇಡ ಸ್ವಲ್ಪ ತಡಿ
ಪಟ ಹೆಂಗೇ ಅಂತ ನೋಡಿ ಹೊಡಿ.
ಯಾವ್ದು ಇಲ್ಲಿ ಸಿಂಗಲ್ ಬಿತ್ತು ಯಾವ್ದು ಇಲ್ಲಿ ಡಬ್ಬಲ್ ಬಿತ್ತು
ಹೇಳುವುದು ಕಷ್ಟ ನೆನಪಿಟ್ಟುಕೊಂಡು
ನಾವ್ ಆಡಬೇಕು ಕುಕ್ಕರಗಾಲಲ್ ಕೂತುಕೊಂಡು
ಹೆಗ್ಡೇರ ಪೈಕಿ ನಾವು ಆಟ ನೋಡಕ್ ಬರುತ್ತೀವಿ
ಹಳೇ ನೋಟು ಅಷ್ಟು ಇಷ್ಟು ಇಟ್ಟುಕೊಂಡು
ನಾವು ಪಟ ಇದ್ರೆ ಆಡಬಹುದು ಅಂದುಕೊಂಡು
ದುಡ್ಡು ಖಾಲಿ ಆದರೆ ಆಗ್ಲಿ ಬಿಡಿ
ಬೆಳಗಿನ್ ಜಾವದ ಆಟ ನೋಡಿ ಹೋಗಿ ಬಿಡಿ..
[ಜಾಕಿ 'ಎಕ್ಕ ರಾಜ ರಾಣಿ' ಕದ್ದಿದ್ದು....]
Friday, September 24, 2010
Tuesday, August 24, 2010
ಎಮ್ಮೆನ್ಸಿ ಕೆಲಸ
ಊಟದೊಂದಿಗೆ ಸ್ವೀಟು ಇರಲೇ ಬೇಕಿಲ್ಲಿ
ಮೀಟಿಂಗು ನಡುನಡುವೆ ಕಾಫಿ ಟೀ ಬೇಕು
ತಿಂಗಳಿಗೆ ಒಂದೆರಡು ಪಾರ್ಟಿ ಇರದಿದ್ದರೆ,
ಎಮ್ಮೆನ್ಸಿ ಕೆಲಸದಲಿ ಮಜವೆಲ್ಲಿ - ತಂತ್ರಜ್ಞ
ಮೀಟಿಂಗು ನಡುನಡುವೆ ಕಾಫಿ ಟೀ ಬೇಕು
ತಿಂಗಳಿಗೆ ಒಂದೆರಡು ಪಾರ್ಟಿ ಇರದಿದ್ದರೆ,
ಎಮ್ಮೆನ್ಸಿ ಕೆಲಸದಲಿ ಮಜವೆಲ್ಲಿ - ತಂತ್ರಜ್ಞ
Thursday, July 29, 2010
ಟ್ರಾಫಿಕ್
ಒರಿಜಿನಲ್.........
ಮೂರು ಸಾಗರ ನೂರು ಮಂದಿರ ದೈವ ಸಾಸಿರವಿದ್ದರೆ
ಗಂಗೆಯಿದ್ದರೆ ಸಿಂಧುವಿದ್ದರೆ ಗಿರಿಹಿಮಾಲಯವಿದ್ದರೆ
ವೇದವಿದ್ದರೆ ಭೂಮಿಯಿದ್ದರೆ ಘನಪರಂಪರೆಯಿದ್ದರೆ
ಏನು ಸಾರ್ಥಕ ಮನೆಯ ಜನರೆ ಮಲಗಿ ನಿದ್ರಿಸುತಿದ್ದರೆ
ಡ್ಯೂಪ್ಲಿಕೇಟ್.......
ನೂರು ಸ್ಟೇಶನ್ ಟ್ರಾಫಿಕ್ ವಾರ್ಡನ್ ಪೋಲೀಸ್ ಸಾವಿರವಿದ್ದರೆ
ಸಿಗ್ನಲಿದ್ದರೆ ಟೈಗರಿದ್ದರೆ ವೀಡಿಯೋ ಕ್ಯಾಮರವಿದ್ದರೆ
ಮೆಟ್ರೋ ಇದ್ದರೆ ಮೋನೋ ಇದ್ದರೆ ವೋಲ್ವೋ ಬಸ್ಸುಗಳಿದ್ದರೆ
ಟ್ರಾಫಿಕ್ ಜಾಮನು ತಡೆಯಲಾಗದು ರೂಲ್ಸು ಮುರಿಯುತಲಿದ್ದರೆ
ಮೂರು ಸಾಗರ ನೂರು ಮಂದಿರ ದೈವ ಸಾಸಿರವಿದ್ದರೆ
ಗಂಗೆಯಿದ್ದರೆ ಸಿಂಧುವಿದ್ದರೆ ಗಿರಿಹಿಮಾಲಯವಿದ್ದರೆ
ವೇದವಿದ್ದರೆ ಭೂಮಿಯಿದ್ದರೆ ಘನಪರಂಪರೆಯಿದ್ದರೆ
ಏನು ಸಾರ್ಥಕ ಮನೆಯ ಜನರೆ ಮಲಗಿ ನಿದ್ರಿಸುತಿದ್ದರೆ
ಡ್ಯೂಪ್ಲಿಕೇಟ್.......
ನೂರು ಸ್ಟೇಶನ್ ಟ್ರಾಫಿಕ್ ವಾರ್ಡನ್ ಪೋಲೀಸ್ ಸಾವಿರವಿದ್ದರೆ
ಸಿಗ್ನಲಿದ್ದರೆ ಟೈಗರಿದ್ದರೆ ವೀಡಿಯೋ ಕ್ಯಾಮರವಿದ್ದರೆ
ಮೆಟ್ರೋ ಇದ್ದರೆ ಮೋನೋ ಇದ್ದರೆ ವೋಲ್ವೋ ಬಸ್ಸುಗಳಿದ್ದರೆ
ಟ್ರಾಫಿಕ್ ಜಾಮನು ತಡೆಯಲಾಗದು ರೂಲ್ಸು ಮುರಿಯುತಲಿದ್ದರೆ
Sunday, July 4, 2010
Tuesday, June 8, 2010
ಅರಿವು
ಹೊಲ ಗದ್ದೆ ನೋಡಿಲ್ಲ ಫಲ ಪೈರು ತಿಳಿದಿಲ್ಲ
ಹಣ್ಣು ಕಾಯಿಯು ಬೆಳೆವುದೆಲ್ಲೆಂದು ಗೊತ್ತಿಲ್ಲ
ಪ್ಯಾಕು ಮಾಡಿದ ಫುಡ್ಡು ಒಂದೊಮ್ಮೆ ದೊರೆಯದಿರೆ
ಊಟಮಾಡುವ ಪರಿಯನಿವ ಅರಿತಿಲ್ಲ - ತಂತ್ರಜ್ಞ
ಹಣ್ಣು ಕಾಯಿಯು ಬೆಳೆವುದೆಲ್ಲೆಂದು ಗೊತ್ತಿಲ್ಲ
ಪ್ಯಾಕು ಮಾಡಿದ ಫುಡ್ಡು ಒಂದೊಮ್ಮೆ ದೊರೆಯದಿರೆ
ಊಟಮಾಡುವ ಪರಿಯನಿವ ಅರಿತಿಲ್ಲ - ತಂತ್ರಜ್ಞ
Sunday, May 30, 2010
Monday, May 10, 2010
ಮೀಟಿಂಗು
ಮೀಟಿಂಗು ಟೈಮ್ ವೆಸ್ಟು
ಎಂದೇಕೆ ಕೊರಗುವಿರಿ
ಮೀಟಿಂಗ್ ಇಲ್ಲದ ದಿನವಿಲ್ಲ, ಕೆಲವರಿಗೆ
ಮೀಟಿಂಗೆ ಟೈಂಪಾಸು - ತಂತ್ರಜ್ಞ
ಎಂದೇಕೆ ಕೊರಗುವಿರಿ
ಮೀಟಿಂಗ್ ಇಲ್ಲದ ದಿನವಿಲ್ಲ, ಕೆಲವರಿಗೆ
ಮೀಟಿಂಗೆ ಟೈಂಪಾಸು - ತಂತ್ರಜ್ಞ
Monday, May 3, 2010
ತೂಕ
ಹೊತ್ತು ಹೊತ್ತಿಗೆ ಊಟ,ನಡುನಡುವೆ ಟೀ ಬ್ರೇಕು
ತಿಂದುದಲುಗದ ಹಾಗೆ ಏರಿಳಿವ ಲಿಫ್ಟುಗಳು
ಕುತಲ್ಲಿಯೇ ಕೂತು ದಿನಕಳೆವ ಈತನಿಗೆ
ತೂಕವೇರದೇ ಇರುವ ಪರಿಯೆಂತು - ತಂತ್ರಜ್ಞ
ತಿಂದುದಲುಗದ ಹಾಗೆ ಏರಿಳಿವ ಲಿಫ್ಟುಗಳು
ಕುತಲ್ಲಿಯೇ ಕೂತು ದಿನಕಳೆವ ಈತನಿಗೆ
ತೂಕವೇರದೇ ಇರುವ ಪರಿಯೆಂತು - ತಂತ್ರಜ್ಞ
Sunday, April 25, 2010
Friday, April 16, 2010
ಮ್ಯಾನೇಜರ್
ಕಾಪಿ ಮಾಡಲು ಕಲಿತು, ಪೇಸ್ಟು ಮಾಡಲು ಮರೆತು
ಕಟ್ಟು ಕಾಪಿಯಲಿ ಕಂಫ್ಯೂಸು ಆಗುತಿರೆ
ಎಡಿಟರ್ರು ಬದಿಗಿಟ್ಟು ಔಟ್ ಲುಕ್ಕು ತೆರೆದಿಟ್ಟು
ಮ್ಯಾನೇಜರಾಗೆಂದ ತಂತ್ರಜ್ಙ
ಕಟ್ಟು ಕಾಪಿಯಲಿ ಕಂಫ್ಯೂಸು ಆಗುತಿರೆ
ಎಡಿಟರ್ರು ಬದಿಗಿಟ್ಟು ಔಟ್ ಲುಕ್ಕು ತೆರೆದಿಟ್ಟು
ಮ್ಯಾನೇಜರಾಗೆಂದ ತಂತ್ರಜ್ಙ
Thursday, April 15, 2010
ವೀಕೆಂಡು
ವೀಕೆಂಡು ಬಂತೆಂದು ಹುಚ್ಚೆದ್ದು ಕುಣಿಯದಿರಿ
ಸೆಕೆಯಲ್ಲಿ ಬಳಲಿ ಬಾಯಾರಿ ಬಸವಳಿವ
ವೀಕೆಂಡಿಗಿಂತ ವೀಕ್ ಡೇನೆ ಹಿತವೆಂದ ತಂತ್ರಜ್ಞ
ಸೆಕೆಯಲ್ಲಿ ಬಳಲಿ ಬಾಯಾರಿ ಬಸವಳಿವ
ವೀಕೆಂಡಿಗಿಂತ ವೀಕ್ ಡೇನೆ ಹಿತವೆಂದ ತಂತ್ರಜ್ಞ
Thursday, April 8, 2010
Tuesday, April 6, 2010
Subscribe to:
Comments (Atom)