ಇದು ಮನೆಯಲ್ಲಿ ಗುಂಡಿಯೊತ್ತಿ ಲೈಟ್ ಹಾಕಿದಂತಲ್ಲ, ನೊಣ ಅಡ್ಡಬಂದರೂ ಹಾರನ್ ಮಾಡಿ ಲೈಟ್ ಹಾಕುವ ದ್ವಿಚಕ್ರ ವಾಹನಗಳಂತಲ್ಲ, ದಿನವಿಡೀ ಉರಿವ ಸ್ಟ್ರೀಟ್ ಲೈಟ್ ಅಲ್ಲ.
ನಮ್ಮ ಊರಕಡೆ ಹಬ್ಬ, ಮದುವೆ ಮುಂತಾದ ಕಾರ್ಯಗಳಲ್ಲಿ ಮಾವಿನ ತೋರಣ ಕಟ್ಟುತ್ತಾರೆ. ಈಗೀಗ ಬಣ್ಣ ಬಣ್ಣದ ಲೈಟ್ಗಳು ಜಾಸ್ತಿಯಾಗಿ ಮಾವಿನೆಲೆಯ ತೋರಣ ಕಡಿಮೆಯಾದರೂ ಶುಭಕಾರ್ಯಗಳಿಗೆ ಮಾವಿನ ತೋರಣದ ಪದ್ದತಿ ಇನ್ನೂ ಜೀವಂತವಾಗಿದೆ. ಬೆಂಗಳೂರಲ್ಲೂ ಇದು ನಡೆದುಬಂದ ಪದ್ದತಿ.
ಹೊಸಪದ್ದತಿಯೊಂದನ್ನು ಎಲ್ಲರೂ ಗಮನಿಸಿರಬಹುದು [ತೀರಾ ಹೊಸದೇನಲ್ಲ ಬಿಡಿ..]. ಚೌತಿ, ದೀಪಾವಳಿ ಬಂತೆಂದರೆ ಸೀರೆ ಬಟ್ಟೆ ಅಂಗಡಿಗಳು ಬಣ್ಣ ಬಣ್ಣದ ದೀಪಗಳ ಸರಮಾಲೆಗಳಿಂದ ಝಗಮಗಿಸುತ್ತಿರುತ್ತವೆ, ಅಕ್ಷಯ ತೃತೀಯದಂದು ಬಂಗಾರದ ಅಂಗಡಿಗಳು ಕಂಗೊಳಿಸುತ್ತಿರುತ್ತವೆ. ಕತ್ತಿಮಸೆದು ಕೂತ ಶಾಪಿಂಗ್ ಮಾಲ್ ಗಳಂತೂ ವರ್ಷವಿಡೀ ಹೊಳೆಯುತ್ತಿರುತ್ತವೆ. ಇರಲಿ.. ಬಟ್ಟೆ, ಬಂಗಾರ ಖರೀದಿಸುವುದೂ ಒಂದು ಶುಭಕಾರ್ಯವೇ.
ಆದರೆ.. ಹೊಸವರ್ಷ ಬಂತೆಂದರೆ ಸಾಕು... ತಗಳಪ್ಪಾ... ಊರಲ್ಲಿರುವ ಬಾರುಗಳಿಗೆಲ್ಲಾ ವೈನ್ ಶಾಪ್ ಗಳಿಗೆಲ್ಲಾ ಕಣ್ಣುಕೋರೈಸುವ ಬಣ್ಣಬಣ್ಣದ ದೀಪಗಳ ಸರಮಾಲೆ. ಹಾದಿಬೀದಿಗಳಲ್ಲಿರುವ ಸಣ್ಣಪುಟ್ಟ ಬಾರುಗಳಲ್ಲೆಲ್ಲಾ ಹಬ್ಬದ ಸಂಭ್ರಮ.. ಅದೇನು ಹಬ್ಬವೋ.. ಸಂಭ್ರಮವೋ ನಾಕಾಣೆ....
No comments:
Post a Comment