Thursday, July 29, 2010

ಟ್ರಾಫಿಕ್

ಒರಿಜಿನಲ್.........
ಮೂರು ಸಾಗರ ನೂರು ಮಂದಿರ ದೈವ ಸಾಸಿರವಿದ್ದರೆ
ಗಂಗೆಯಿದ್ದರೆ ಸಿಂಧುವಿದ್ದರೆ ಗಿರಿಹಿಮಾಲಯವಿದ್ದರೆ
ವೇದವಿದ್ದರೆ ಭೂಮಿಯಿದ್ದರೆ ಘನಪರಂಪರೆಯಿದ್ದರೆ
ಏನು ಸಾರ್ಥಕ ಮನೆಯ ಜನರೆ ಮಲಗಿ ನಿದ್ರಿಸುತಿದ್ದರೆ

ಡ್ಯೂಪ್ಲಿಕೇಟ್.......
ನೂರು ಸ್ಟೇಶನ್ ಟ್ರಾಫಿಕ್ ವಾರ್ಡನ್ ಪೋಲೀಸ್ ಸಾವಿರವಿದ್ದರೆ
ಸಿಗ್ನಲಿದ್ದರೆ ಟೈಗರಿದ್ದರೆ ವೀಡಿಯೋ ಕ್ಯಾಮರವಿದ್ದರೆ
ಮೆಟ್ರೋ ಇದ್ದರೆ ಮೋನೋ ಇದ್ದರೆ ವೋಲ್ವೋ ಬಸ್ಸುಗಳಿದ್ದರೆ
ಟ್ರಾಫಿಕ್ ಜಾಮನು ತಡೆಯಲಾಗದು ರೂಲ್ಸು ಮುರಿಯುತಲಿದ್ದರೆ

Sunday, July 4, 2010

ಚಾಟು ಮಾಡಲು ಬೇಕು
ಮೈಲು ಕಳಿಸಲು ಬೇಕು
ನೆಟ್ಟು ಹುಡುಕಲು ಇದು ಬೇಕೇ ಬೇಕು
ಫೋಟೋ ವಿಡಿಯೋಗಳನು
ನೋಡಿ ಆನಂದಿಸುತ
ಗೂಗಲಿಗೆ ಮನಸಾರೆ "ಜೈ" ಅಂದ ತಂತ್ರಜ್ಞ

ಎಂಟರಿಂದ ಆರು

ಆರು ಎಂಟಾದರೇನು
ಎಂಟು ಆರಾದರೇನು
ಎಂಟರಿಂದ ಆರರ ಕೆಲಸ‌
ನಿನಗಲ್ಲ - ತಂತ್ರಜ್ಞ