Sunday, May 30, 2010

ಟ್ಯಾಕ್ಸ್

ಅಪ್ರೈಸಲ್ ಬಂದಾಗ
ಅಪ್ಪಿ ಮುತ್ತಿಟ್ಟಂತೆ
ಟ್ಯಾಕ್ಸ್ ಫೈಲಿಂಗ್ ಬಂದಾಗ
ಎದ್ದು ಎದೆಗೊದ್ದಂತೆ - ತಂತ್ರಜ್ಞ

Monday, May 10, 2010

ಮೀಟಿಂಗು

ಮೀಟಿಂಗು ಟೈಮ್ ವೆಸ್ಟು
ಎಂದೇಕೆ ಕೊರಗುವಿರಿ
ಮೀಟಿಂಗ್ ಇಲ್ಲದ ದಿನವಿಲ್ಲ, ಕೆಲವರಿಗೆ
ಮೀಟಿಂಗೆ ಟೈಂಪಾಸು - ತಂತ್ರಜ್ಞ

Monday, May 3, 2010

ತೂಕ

ಹೊತ್ತು ಹೊತ್ತಿಗೆ ಊಟ,ನಡುನಡುವೆ ಟೀ ಬ್ರೇಕು
ತಿಂದುದಲುಗದ ಹಾಗೆ ಏರಿಳಿವ ಲಿಫ್ಟುಗಳು
ಕುತಲ್ಲಿಯೇ ಕೂತು ದಿನಕಳೆವ ಈತನಿಗೆ
ತೂಕವೇರದೇ ಇರುವ ಪರಿಯೆಂತು - ತಂತ್ರಜ್ಞ