Friday, February 11, 2011

ಮೊದಲ ನೋಟದಿ ಕಂಡೆ
ನಿನ್ನ ಮುಖ ಚಂದ್ರವ‌
ಬೆರಗುಗಣ್ಣಲಿ ನೋಡಿ
ನಗುವ ನಿನ ಛ‍ಂದವ

ಮುದ್ದು ಮುಖದಲಿ ಬೆರೆತ‌
ಹೊಳೆವ ಮೃದು ಕೆನ್ನೆಯ‌
ಮೌನದಲ್ಲಿಯೇ ಮುಳುಗಿ
ಸೆಳೆವ ನಿನ ಜಾಣ್ಮೆಯ

ತಂಪು ಬೆಳದಿಂಗಳ‌
ತಂದೆ ಬಾನಿನಲಿ
ಮರುಳಾದೆ ನಾನಿನಗೆ
ಮೊದಲ ಸವಿ ಘಳಿಗೆಯಲಿ

ಅಪ್ಪಿಕೊಳಲೇ ನಿನ್ನ
ಮುತ್ತು ಕೊಡಲೇ ಒಂದು
ಮಲಗಿರುವ ತೊಟ್ಟಿಲನು
ಬಳಸಿ ಬಂದು.....

ಅಡಿಯಾಳು

ಅಡಿಯಾಳು ಆದವನು
ಮೊಗವೆತ್ತಿ ನಗಬಹುದೆ
ನಕ್ಕರೂ ಅದ‌ ಗ್ರಹಿಸುವ
ಜಗವಿಹುದೇ - ತಂತ್ರಜ್ಞ

ಹುಳುಕು

ಮುಚ್ಚಿಟ್ಟ ಕೆಂಡವದು
ಹೊಗೆಯನುಗುಳದಿರಬಹುದೆ
ಬೆಳೆಸಿದಾ ಹುಳುಕು ಕೆಡುಕಾಗಿ
ಪರಿಮಳವ ಸೂಸುವುದೆ ‍- ತಂತ್ರಜ್ಞ

Wednesday, February 9, 2011

ವಿಧಿಯಾಟ

ದಿಕ್ಕಿರದ ದಾರಿಯಲಿ
ಗುರಿಯಿರದ ಪಯಣದಲಿ
ಹರಿದು ಹೋಗುವ ಬದುಕ
ಬಂಡಿ ಹಲವು

ದಿಕ್ಕು ತಪ್ಪುವ ತನಕ‌
ಗುರಿಯ ಸೇರುವ ತವಕ‌
ನಡುನಡುವೆ ಕಳಚುವ‌
ಕೊಂಡಿ ಕೆಲವು

ಕಳಚಿಕೊಂಡಿದೆ ಕೊಂಡಿ
ಚಲನೆ ತಪ್ಪಿದೆ ಬಂಡಿ
ವಿಧಿಯಾಟ ಏನೆಂದು
ಅರಿಯಲಹುದೇ..?