Sunday, April 25, 2010

ಖುಶಿ

ಮಳೆ ಬಂದ ಖುಶಿ ಇಲ್ಲ,
ಉರಿ ಬಿಸಿಲ ಧಗೆಯಿಲ್ಲ
ದಿನವಿಡೀ ಕುಳಿತು ಕೀ ಕುಟ್ಟುವವಗೆ
ಜೀವನದ ರುಚಿಯಿಲ್ಲ ತಂತ್ರಜ್ಞ

Friday, April 16, 2010

ಮ್ಯಾನೇಜರ್

ಕಾಪಿ ಮಾಡಲು ಕಲಿತು, ಪೇಸ್ಟು ಮಾಡಲು ಮರೆತು
ಕಟ್ಟು ಕಾಪಿಯಲಿ ಕಂಫ್ಯೂಸು ಆಗುತಿರೆ
ಎಡಿಟರ್ರು ಬದಿಗಿಟ್ಟು ಔಟ್ ಲುಕ್ಕು ತೆರೆದಿಟ್ಟು
ಮ್ಯಾನೇಜರಾಗೆಂದ ತಂತ್ರಜ್ಙ

Thursday, April 15, 2010

ವೀಕೆಂಡು

ವೀಕೆಂಡು ಬಂತೆಂದು ಹುಚ್ಚೆದ್ದು ಕುಣಿಯದಿರಿ
ಸೆಕೆಯಲ್ಲಿ ಬಳಲಿ ಬಾಯಾರಿ ಬಸವಳಿವ
ವೀಕೆಂಡಿಗಿಂತ ವೀಕ್ ಡೇನೆ ಹಿತವೆಂದ ತಂತ್ರಜ್ಞ

Thursday, April 8, 2010

ಬಗ್

ಬಗ್ ಬಗ್ಗೆಂದು ಯಾಕೆ
ಬೆನ್ನು ಬೀಳುವಿರಿ,
ಬಗ್ಗಲ್ಲವೋ ಅದು
ಹೊಸಾ ಫೀಚರ್ರು ನೋಡೆಂದ ತಂತ್ರಜ್ಞ

Tuesday, April 6, 2010

ಏಸಿ..

ಏಸಿಯಲಿ ಕೂತವಗೆ
ಬೇಸಗೆಯ ಬಿಸಿಯಿಲ್ಲ,
ಬಿಸಿಲಲ್ಲಿ ಬೇಯುವವ‌ಗೆ
ಏಸಿಯ ಹಂಗಿಲ್ಲ ತಂತ್ರಜ್ಞ...