ನಿನ್ನ ಮುಖ ಚಂದ್ರವ
ಬೆರಗುಗಣ್ಣಲಿ ನೋಡಿ
ನಗುವ ನಿನ ಛಂದವ
ಮುದ್ದು ಮುಖದಲಿ ಬೆರೆತ
ಹೊಳೆವ ಮೃದು ಕೆನ್ನೆಯ
ಮೌನದಲ್ಲಿಯೇ ಮುಳುಗಿ
ಸೆಳೆವ ನಿನ ಜಾಣ್ಮೆಯ
ತಂಪು ಬೆಳದಿಂಗಳ
ತಂದೆ ಬಾನಿನಲಿ
ಮರುಳಾದೆ ನಾನಿನಗೆ
ಮೊದಲ ಸವಿ ಘಳಿಗೆಯಲಿ
ಅಪ್ಪಿಕೊಳಲೇ ನಿನ್ನ
ಮುತ್ತು ಕೊಡಲೇ ಒಂದು
ಮಲಗಿರುವ ತೊಟ್ಟಿಲನು
ಬಳಸಿ ಬಂದು.....
No comments:
Post a Comment